
25th April 2025
ಬೀದರ. ಏ. 24 :- ಈ ತಿಂಗಳ ೨೬ರಂದು ದಾವಣಗೆರೆ ನಗರದ ಹೈಸ್ಕೂಲ್ ಫೀಲ್ಡ್ ಬಳಿ ಇರುವ ಬೀರ್ಲಿಂಗೇಶ್ವರ ದೇವಸ್ಥಾನದ ಅವರಣದಲ್ಲಿ ಎದ್ದೇಳು ಕರ್ನಾಟಕ ಸಂಘಟನೆ ಸೇರಿದಂತೆ ೧೦೦ಕ್ಕೂ ಅಧಿಕ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಸಂರಕ್ಷರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಓಂಪ್ರಕಾಶ ರೊಟ್ಟೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಕರ್ನಾಟಕದಲ್ಲಿ ೧೦೦ಕ್ಕೆ ಮೇಲ್ಪಟ್ಟು ಪ್ರಗತಿಪರ ಜನಪರ ಕಾಳಜಿ ಹೊಂದಿರುವ ಸಂಘಟನೆ ಪ್ರಮುಖರು ಚಿಂತನ-ಮoಥನ ಮಾಡಿಕೊಂಡು ಸಂಘಟನೆಗಳ ಒಕ್ಕೂಟವೇ ಎದ್ದೇಳು ಕರ್ನಾಟಕ ಹೆಸರಿನಲ್ಲಿ ಸಂವಿಧಾನ ಸಂರಕ್ಷಣಾ ಪಡೆ ರಚಿಸಲಾಗಿದೆ. ಸಂವಿಧಾನದ ಆಶಗಳು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೆ ಬುಡಮೇಲು ಮಾಡಲು ಹೊರಟಿರುವ ಪ್ರಮುಖವಾದ ಎರಡು ರಾಷ್ಟ್ರೀಯ ಪಕ್ಷಗಳು ಸಂವಿಧಾನ ಬದಲಾವಣೆ ಮತ್ತು ಸಂವಿಧಾನ ಉಳಿಸುತ್ತೇವೆಂದು ಹೇಳುತ್ತಲೆ ಭಾರತದ ೮೦% ಬಡವರಿರುವ ಈ ದೇಶದ ಯುವಕರು ರೈತರು, ಕೂಲಿಕಾರ್ಮಿಕರು, ಮಕ್ಕಳು, ಮಹಿಳೆಯರು ವೃದ್ಧರು, ಹಸನಾದ ಬದುಕಿಗೆ ಸಂವಿಧಾನ ಬದ್ಧವಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ದೂರಪಯೋಗ ಹಾಗೂ ಸಂವಿಧಾನ ಅಡಿಯಲ್ಲಿರುವ ಚುನಾವಣೆ ಆಯೋಗ, ಇ.ಡಿ. ಮುಂತಾದ ಸಂಸ್ಥೆಗಳನ್ನು ದೂರ್ಬಳಕೆ ಮಾಡಿಕೊಂಡು ಭ್ರಷ್ಟರ ರಕ್ಷಣೆ, ಶ್ರೀಮಂತರ ಕಂಪನಿಗಳಿಗೆ ಸರಕಾರದಿಂದ ಧನಸಹಾಯ ಮಾಡುವುದು, ಚುನಾಯಿತ ಪ್ರತಿನಿಧಿಗಳನ್ನು ೧೦೦ ಕೋಟಿ ಹಣಕೊಟ್ಟು ಖರೀದಿ ಮಾಡಿ ರಾಷ್ಟ್ರಪತಿ ಭವನ ರಾಜ್ಯಪಾಲರ ಭವನ ದುರುಪಯೋಗ ಮಾಡಿಕೊಂಡು ರಾತೋರಾತ್ರಿ ಸರಕಾರಗಳನ್ನು ಉರುಳಿಸುವ ಕಾರ್ಯ ಮಾಡುತ್ತಿವೆ ಎಂದರು.
ಪ್ರಜಾಪ್ರಭುತ್ವ ಭಾರತದಲ್ಲಿ ಭಾರತೀಯರಾದ ನಾವುಗಳು ನಮ್ಮನ್ನು ನಾವೇ ಅರ್ಪಿಸಿಕೊಂಡ ಸಂವಿಧಾನವನ್ನು ಸಂರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆಯ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಮೂರು ಧರ್ಮಗಳ ಧರ್ಮಾಂಧರು ಸಂವಿಧಾನದ ವಿರುದ್ಧವಾಗಿ ನಡೆದುಕೊಂಡು ಈ ದೇಶದ ಮುಗ್ಧ ಯುವಕರುನ್ನು ತಮ್ಮ ತಮ್ಮ ಧರ್ಮಾಂಧತೆಯ ವಿಷ ಬೀಜ ಬಿತ್ತಿ ದೇಶದ ಸಂವಿಧಾನಕ್ಕೆ ಗಂಡಾoತರ ತಂದು ದೇಶದಲ್ಲಿ ಅಜಾಗರೂಕತೆಯ ವಾತಾವರಣ ನಿರ್ಮಿಸಿದ್ದಾರೆ. ಇದನ್ನು ತಡೆಗಟ್ಟಲಿಕ್ಕೆ ಸಂವಿಧಾನ ಸಂರಕ್ಷಣೆಗಾಗಿ ಕರ್ನಾಟಕದಲ್ಲಿ ದೇಶಪ್ರೇಮಿ ಯುವಪಡೆ ಕಟ್ಟಿಕೊಂಡು “ಸಂವಿಧಾನ ನಮ್ಮ ದೇಶದ ಹೆಮ್ಮೆ ನಮ್ಮ ದೇಶದ ಗುರುತು ನಮ್ಮ ದೇಶದ ಆತ್ಮೀಯತೆ”ಯಾಗಿದೆ. ಆ ಕಾರಣಕ್ಕಾಗಿ ಸಂವಿಧಾನ ಸಂರಕ್ಷಣೆಗಾಗಿ ಪಣತೊಡಬೇಕು. ಸಂವಿಧಾನ ಸಂರಕ್ಷಣೆಗಾಗಿ ದೇಶಪ್ರೇಮ ಯುವಕರ ಪಡೆ ಕಟ್ಟಲೇಬೇಕಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ೧೦ ಲಕ್ಷ ಯುವ ದೇಶಪ್ರೇಮಿಗಳ ಪಡೆಯ ಕಟ್ಟುವ ಕಾರ್ಯದಲ್ಲಿ ತೊಡಗಿ ಎದ್ದೇಳು ಕರ್ನಾಟಕ ಸಂವಿಧಾನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸಂವಿಧಾನ ಸಂರಕ್ಷಣೆ ಎಂದರೆ ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ಪ್ರೀತಿ ಮತ್ತು ಐಕ್ಯತೆಯ ಸಂದೇಶವನ್ನು ಸಾರುವುದು, ಸತ್ಯದ ನಿಲುವು ತಿಳಿಸುವುದು, ಸಮಾನತೆಯ ಹರಿಕಾರರಾಗುವುದು, ನ್ಯಾಯದ ಪರಿಪಾಲಕರಾಗುವುದು, ದೇಶದ ಸಂವಿಧಾನದ ಸಂರಕ್ಷಣೆ ಯೋಧರಾಗುವುದು ಈ ಒಂದು ಸಂದೇಶವನ್ನು ಸಾರಲು ೨೬ ಏಪ್ರಿಲ್ ೨೦೨೫ರಂದು ದಾವಣಗೇರೆಯಲ್ಲಿ ೧೫ ಸಾವಿರ ಯುವಕರನ್ನು ಜಾಗೃತಗೊಳಿಸಲು ಮೊದಲ ಹಂತದ ಸಮಾವೇಶ ಹಮ್ಮಿಕೊಂಡಿದ್ದೇವೆ. ಆದ್ದರಿಂದ ಬೀದರದಿಂದ ೨೦೦ ಜನ ಯುವಕರು ಹೋಗುವ ತಯ್ಯಾರಿ ಮಾಡಿಕೊಂಡಿದ್ದೇವೆ. ಇನ್ನು ಹೆಚ್ಚಿನ ಸಂಖ್ಯೆ ಬರುವವರಿದ್ದರೆ ಬೀದರ ಜಿಲ್ಲೆ ಎದ್ದೇಳು ಕರ್ನಾಟಕ ಜಿಲ್ಲೆ ಸಂಘಟನೆ ಸಂಚಾಲಕರಾದ ಓಂಪ್ರಕಾಶ ರೊಟ್ಟೆ, ಯುವಪಡೆ ಮುಖಂಡರಾದ ಸಂದೀಪ ಮುಕುಂದೆ, ಜಗದೀಶ್ವರ ಬಿರಾದಾರ, ಜಾಗೃತಿ ಕರ್ನಾಟಕದ ಮುಖಂಡರಾದ ವಿನಯ ಮಾಳಗೆಯವರನ್ನು ಸಂಪರ್ಕಿಸಬೇಕೆAದು ಓಂಪ್ರಕಾಶ ರೊಟ್ಟೆ ಹೇಳಿದರು.
ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕರಾದ ಮಹಮ್ಮದ್ ನಿಜಾಮುದ್ದಿನ್, ಜಗದೀಶ್ವರ ಬಿರಾದಾರ, ಸಂದೀಪ್ ಮುಕಿಂದೆ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಮಹೇಶ ಗೋರನಾಳಕರ್, ಪ್ರಮುಖರಾದ ಪ್ರಕಾಶ ರಾವಣ, ಕಾಳಿದಾಸ ಸುರ್ಯವಂಶಿ, ಜೈವಂತ ಸಿಂಗಾರೆ, ಬಾಲಾಜಿ ಸೂರ್ಯವಂಶಿ, ಸೈಯದ್ ಇಬ್ರಾಹಿಂ ಪತ್ರಿಕಾ ಗೋಷ್ಟಿಯಲ್ಲಿದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ